₹345.00
ಆಯುರ್ವೇದದ ಜ್ಞಾನದ ಕಂಪನ್ನು ಪ್ರತಿ ಮನಕ್ಕೂ ಮುಟ್ಟಿಸಲು EasyAyurveda.Com ನಲ್ಲಿ 2009 ರಿಂದಲೂ ಆಂಗ್ಲಭಾಷೆಯಲ್ಲಿ ಆಯುರ್ವೇದ ಸಂಬಂಧಿ ಸಾವಿರಾರು ಲೇಖನಗಳನ್ನು ನಾವು ಬರೆದಿದ್ದೇವೆ
– Written by Dr J V Hebbar
ಆಯುರ್ವೇದದ ಜ್ಞಾನದ ಕಂಪನ್ನು ಪ್ರತಿ ಮನಕ್ಕೂ ಮುಟ್ಟಿಸಲು EasyAyurveda.Com ನಲ್ಲಿ 2009 ರಿಂದಲೂ ಆಂಗ್ಲಭಾಷೆಯಲ್ಲಿ ಆಯುರ್ವೇದ ಸಂಬಂಧಿ ಸಾವಿರಾರು ಲೇಖನಗಳನ್ನು ನಾವು ಬರೆದಿದ್ದೇವೆ. ಆದರೆ ಕನ್ನಡಿಗರಾದ ನಮಗೆ ಇಷ್ಟು ವರ್ಷಗಳವರೆಗೂ ಸುಮಧುರ ಕನ್ನಡ ಭಾಷೆಯಲ್ಲಿ ಯಾವುದೇ ಆಯುರ್ವೇದ ಸಂಬಂಧಿತ ಸೇವೆಯನ್ನು ಅರ್ಪಿಸಲು ಸಾಧ್ಯವಾಗಿರಲಿಲ್ಲ. ಈ ಸಲುವಾಗಿ ಮುಂದಿನ ಪ್ರಯತ್ನವೆಂಬಂತೆ “ಆಯುರ್ವೇದ ಸಾಂತ್ವನ” ಎಂಬ ಪುಸ್ತಕವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.
ಪುರಾತನ ಭಾರತೀಯ ವೈದ್ಯಕೀಯ ವಿಜ್ಞಾನ – ಆಯುರ್ವೇದದ ತತ್ತ್ವಗಳನ್ನು ಆಧರಿಸಿ ಆರೋಗ್ಯಕರ ಜೀವನಶೈಲಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ವಿಚಾರದ ಕುರಿತು ಈ ಪುಸ್ತಕವು ನಿಮಗೆ ಮಾರ್ಗದರ್ಶನ ನೀಡುತ್ತದೆ.
ಚರಕ ಸಂಹಿತಾ, ಸುಶ್ರುತ ಸಂಹಿತಾ, ಅಷ್ಟಾಂಗ ಹೃದಯ, ಭಾವಪ್ರಕಾಶ, ಭೋಜನ ಕುತೂಹಲಂ ಇತ್ಯಾದಿ ಆಯುರ್ವೇದ ಗ್ರಂಥಗಳ ಉಲ್ಲೇಖಗಳೊಂದಿಗೆ ದೈನಂದಿನ ಜೀವನಕ್ಕೆ ಉಪಯುಕ್ತ ಮಾಹಿತಿಗಳ ಸಂಗ್ರಹ ಈ ಪುಸ್ತಕ.
ಅಡುಗೆಮನೆಯ ಪದಾರ್ಥಗಳಾದ ಶುಂಠಿ, ಮೆಂತ್ಯ, ಹಸುವಿನ ಹಾಲು ಮತ್ತು ಮೇಕೆ ಹಾಲು,
ಸಾಮಾನ್ಯವಾಗಿ ಮನೆಮದ್ದಿನಲ್ಲಿ ಬಳಸುವ ತುಳಸಿ, ಪುದೀನ, ಮಾವಿನಶುಂಠಿ, ಸೊಗದೇಬೇರು, ಭದ್ರಮುಷ್ಟಿ ಇತ್ಯಾದಿ ಸಸ್ಯಗಳ ಶಾಸ್ತ್ರೀಯ ಮಾಹಿತಿ,
ಷಡ್ ಬಿಂದು ತೈಲ, ಮುರಿವೆಣ್ಣ, ಬ್ರಾಹ್ಮೀ ವಟಿ, ವಾಯು ಮಾತ್ರೆ, ಅವಿಪತ್ತಿಕರ ಚೂರ್ಣ, ಸಪ್ತಾಮೃತ ಲೋಹ, ಗುಡೂಚ್ಯಾದಿ ಕಷಾಯ, ಗಂಧಕವಟಿ ಮತ್ತು ಗಂಧಕ ರಸಾಯನ, ಕೈಶೋರ ಗುಗ್ಗುಳು ಮುಂತಾದ ಆಯುರ್ವೇದ ಔಷಧಗಳ ವಿವರಣೆ,
ಸಂಧಿವಾತ, ಬೊಜ್ಜು, ಮೈಗ್ರೇನ್ ತಲೆನೋವು, ಅಸ್ತಮಾ, ಅಧಿಕ ರಕ್ತದೊತ್ತಡ, ಮಹಿಳೆಯರ ಪಿ.ಸಿ.ಓ.ಡಿ. ಸಮಸ್ಯೆ, ಉರಿಮೂತ್ರ ಇತ್ಯಾದಿ ಕಾಯಿಲೆಗಳ ಸಂಕ್ಷಿಪ್ತ ಮಾಹಿತಿ,
Copyright 2023 © All rights Reserved.